‘ಮರಿ ಟೈಗರ್ ಮುಂದುವರೆದ ಭಾಗ ಆರಂಭ
Posted date: 14 Thu, Jul 2016 – 09:28:01 AM

ವಿನೋದ್ ಪ್ರಭಾಕರ್ ನಟನೆಯ ‘ಮರಿ ಟೈಗರ್ ಚಿತ್ರಕ್ಕೆ ಎರಡನೇ ಹಾಗೂ ಕಡೇ ಹಂತದ ಚಿತ್ರೀಕರಣ ಶುರುವಾಗಿದೆ.
ನಂದ ಲವ್ಸ್ ನಂದಿತಾ, ಭಾಗ್ಯದ ಬಳೆಗಾರ ಚಿತ್ರಗಳನ್ನು ರಮೇಶ್ ಕಷ್ಯಪ್ ನಿರ್ಮಾಪಕರಾಗಿರುವ ಈ ಚಿತ್ರವನ್ನು ಪಿಎನ್ ಸತ್ಯ ನಿರ್ದೇಶಿಸುತ್ತಿದ್ದಾರೆ.  ಚೆಂದನೆಯ ಲೊಕೇಷನ್ನುಗಳಲ್ಲಿ ಮೊದಲ ಹಂತದ ಚಿತ್ರೀಕರಣ ನಡೆದಿತ್ತು.  ಇದೀಗ ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಕಡೇ ಹಂತದ ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ. ಇನ್ನು ಹದಿನೈದು ದಿನಗಳಲ್ಲಿ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯವಾಗಲಿದೆ.
ವಿನೋದ್ ಪ್ರಭಾಕರ್ ವೃತ್ತಿ ಜೀವನಕ್ಕೆ ಮಹತ್ವದ ತಿರುವು ನೀಡಲಿದೆ ಎಂಬ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರಕ್ಕೆ ‘ಚಿಂಗಾರಿ’ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಎರಡನೇ ನಾಯಕಿಯಾಗಿದ್ದ ತೇಜು ನಾಯಕಿಯಾಗಿದ್ದಾರೆ. ‘ಟೈಸನ್’ ಚಿತ್ರದ ಅಭೂತಪೂರ್ವ ಯಶಸ್ಸಿನ ಖುಷಿಯಲ್ಲಿರುವ ವಿನೋದ್ ಪ್ರಭಾಕರ್ ಅವರಿಗೆ ‘ಮರಿ ಟೈಗರ್  ಇನ್ನಷ್ಟು ಎನರ್ಜಿ ತಂದುಕೊಟ್ಟಿದೆ.
ಅಜಯ್ ಕುಮಾರ್ ಕಥೆ ಬರೆದಿರುವ ಈ ಚಿತ್ರಕ್ಕೆ ಮಲೇಷಿಯಾದ ರಾಕ್ ರವಿ ಸಂಗೀತ ನಿರ್ದೇಶನ ಮತ್ತು ಜೈ ಆನಂದ್ ಛಾಯಾಗ್ರಹಣ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed